Index   ವಚನ - 2    Search  
 
ಆವ ವರ್ಣವ ಕೂಡಿದಡೂ ಅಪ್ಪುಮಯ ತಪ್ಪದಂತೆ, ಸರ್ವಗುಣಸಂಪನ್ನನಾದಲ್ಲಿ ಭಕ್ತನೆಂದಡೂ ತಾನಾಗಿ, ಮಹೇಶ್ವರ[ನೆಂ]ದಡೂ ತಾನಾಗಿ, ಪ್ರಸಾದಿಯೆಂದಡೂ ತಾನಾಗಿ, ಪ್ರಾಣಲಿಂಗಿಯೆಂದಡೂ ತಾನಾಗಿ, ಶರಣನೆಂದಡೂ ತಾನಾಗಿ, ಐಕ್ಯನೆಂದಡೂ ತಾನಾಗಿ, ಒಂದನಹುದು ಒಂದನಲ್ಲಾ ಎನ್ನದೆ ಕತ್ತಲೆಯಲ್ಲಿ ಹಾಲಕೊಂಡಡೆ ಸಿಹಿ ತಪ್ಪುವುದೆ? ಸತ್ತು ಚಿತ್ತು ಆನಂದವೆಂಬ ಗೊತ್ತ ಹರಿದವಂಗೆ ತಟ್ಟು ಮುಟ್ಟು ಹತ್ತುವ ಭಾವ ಒಂದೂ ಇಲ್ಲ ಕಾಮಭೀಮ ಜೀವಧನದೊಡೆಯ ತಾನು ತಾನೆ.