ಆವಾವ ಜಾತಿ ಗೋತ್ರದಲ್ಲಿ ಬಂದಡೂ
ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು.
ಆವಾವ ವ್ರತವ ಹಿಡಿದಡೂ, ಇದಿರ ದಾಕ್ಷಿಣ್ಯವ ಮರೆದು
ತನ್ನಯ ತ್ರಿಕರಣ ಶುದ್ದವಾಗಿ ನಡೆಯಬೇಕು.
ಪರಪುರುಷಾರ್ಥಕ್ಕೆ ಆರಿಯಿಸಿಕೊಂಬಡೆ ಮೂಗ
ಅರುಹಿರಿಯರು ಹೇಳಿದರೆಂದು ಕಲಸಬಹುದೆ ಅಮಂಗಲವ.
ಇಂತೀ ಕ್ರೀಯಲ್ಲಿ ಭಾವಶುದ್ದವಾಗಿ
ಭಾವದಲ್ಲಿ ದಿವ್ಯಜ್ಞಾನಪರಿಪೂರ್ಣವಾಗಿಪ್ಪ ಗುರುಚರಭಕ್ತಂಗೆ
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವು ತಾನೆಯೆಂದು ಭಾವಿಸುವನು.
Art
Manuscript
Music
Courtesy:
Transliteration
Āvāva jāti gōtradalli bandaḍū
tam'ma tam'ma kāyakakke, bhaktige sūtakavilladirabēku.
Āvāva vratava hiḍidaḍū, idira dākṣiṇyava maredu
tannaya trikaraṇa śuddavāgi naḍeyabēku.
Parapuruṣārthakke āriyisikombaḍe mūga
aruhiriyaru hēḷidarendu kalasabahude amaṅgalava.
Intī krīyalli bhāvaśuddavāgi
bhāvadalli divyajñānaparipūrṇavāgippa gurucarabhaktaṅge
cennabasavaṇṇa sākṣiyāgi
kamaḷēśvaraliṅgavu tāneyendu bhāvisuvanu.