Index   ವಚನ - 4    Search  
 
ಎಲ್ಲವ ಬಿಟ್ಟು ಹಲ್ಲ ಸುಲಿಯ ಬಂದೆ. ಮುನ್ನಿನಲ್ಲಿಯ ಹಾವಚೆ ಹಲ್ಲ ಬಿಡದು ನೋಡಾ. ಮೆಲ್ಲನೆ ಢಾಳಿಸಿದಡೆ ಹಾವಚೆ ಒಲ್ಲಗಾಗದು. ಬಲ್ಲಿತ್ತಾಗಿ ಢಾಳಿಸಿದಡೆ ಒಸಡಿನಲ್ಲಿ ಜಾರಿತ್ತು. ಇಂತೀ ಬಲ್ಲತನದಲ್ಲಿ ಸಂಸಾರದ ಬಾಯ ಹಲ್ಲ ಸುಲಿಯಬೇಕು. ಇದ ಬಲ್ಲವರ ಬಲ್ಲ ತಾನರಿಯ, ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ.