Index   ವಚನ - 3    Search  
 
ಕತ್ತಲೆಯಲ್ಲಿ ಕನ್ನವನಿಕ್ಕಿದಡೆ ಎನಗೆ ಕತ್ತಿಯ ಕೊಟ್ಟ ಕರ್ತುವಿಗೆ ಭಂಗ. ಅವರು ಮರೆದಿರ್ದಲ್ಲಿ ಮನೆಯ ಹೊಕ್ಕಡೆ ಎನ್ನ ಚೋರತನದ ಅರಿಕೆಗೆ ಭಂಗ. ಮರೆದಿರ್ದವರ ಎಬ್ಬಿಸಿ ಅವರಿಗೆ ಅವರೊಡವೆಯ ತೋರಿ ಎನ್ನೊಡವೆಯ ತಂದೆ ಮಾರನವೈರಿ ಮಾರೇಶ್ವರಾ.