Index   ವಚನ - 2    Search  
 
ಕಾಯದಿಂದ ಸತ್ಕ್ರೀಯ ಕಂಡೆ. ಸತ್ಕ್ರೀಯಿಂದ ಸದ್ಭಾವವ ಕಂಡೆ. ಸದ್ಭಾವದಿಂದ ನಿಮ್ಮ ನಿಜಮೂರ್ತಿಯ ಕಂಡೆ. ನಿಮ್ಮ ನಿಜಮೂರ್ತಿಯಿಂದ ಸ್ವಾನುಭಾವವಳವಟ್ಟುದ ಕಂಡೆನಯ್ಯಾ. ಸ್ವಾನುಭಾವಜ್ಞಾನದಿಂದ ಅಂಗಕರಣೇಂದ್ರಿಯ ಸೂತಕಪಾತಕಕ್ಕೆ ಹೊರಗಾದೆನಯ್ಯಾ ಕದಂಬಲಿಂಗವೆ, ನೀವೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಕಾರಣ, ನಿಮ್ಮನೆನ್ನ ಸರ್ವಾಂಗದಲ್ಲಿ ಕಂಡೆನಯ್ಯಾ.