Index   ವಚನ - 8    Search  
 
ಮಾಟ ಕೂಟವೆಂಬ ತೆಪ್ಪವ ಮಾಡಿ, ಮೂರ್ತಿ ವಿಶ್ವಾಸವೆಂಬ ಕಣೆಯ ಹಿಡಿದು, ಒತ್ತುತ್ತಿರಲಾಗಿ ಹಾಯಿ ಮಾರುತನೆಂಬ ಮತ್ಸ್ಯ. ಆ ಸರಹು ನೋಡಿ ತೆಪ್ಪವನೊತ್ತುತ್ತಿರಲಾಗಿ ತ್ರಿವಿಧದ ಸತ್ತೆಯ, ಸರ್ವೇಂದ್ರಿಯ ಬೆಳೆದ ಪಾಸೆಯ ಮರೆಯಲ್ಲಿ ತಪ್ಪಿಹೋಯಿತ್ತು ಮತ್ಸ್ಯ. ಇಂತೀ ಬರಿ ಕುಕ್ಕೆಯ ಹೊತ್ತು ಮತ್ಸ್ಯವ ಕಾಣದೆ ವೆಚ್ಚ ಕಡಹಿಲ್ಲ. ಇದರಚ್ಚಿಗವ ಬಿಡಿಸಾ, ಕದಕತನ ಬೇಡ ಕದಂಬಲಿಂಗಾ.