Index   ವಚನ - 9    Search  
 
ವೇದ ಕಲ್ಲಿಯಾಗಿ, ಶಾಸ್ತ್ರ ಮಣಿಯಾಗಿ, ಪುರಾಣ ತೊಡಕಿನ ಬಂಧದ ನೂಲಾಗಿ, ಆಗಮದ ಪಸರದಲ್ಲಿ ಆಯತವ ಮಾಡಿ, ಗುರುವೆಂಬ ತಡಿಯ ಮೆಟ್ಟಿ, ನಾಭಿಮಧ್ಯವೆಂಬ ಲಿಂಗದ ಜಲವ ಹೊಕ್ಕು, ಮಹಾಸ್ಥಳಕುಳ ವಿವರಂಗಳೆಂಬ ಮಡುವಿಗೆ ಇಡಲಾಗಿ ಅಡಗಿದ ಮತ್ಸ್ಯವೆದ್ದಿತ್ತು. ಬಲೆಯ ಹೊಲಬ ಕಂಡು ಅದು ಸ್ಥೂಲಕ್ಕೆ ಸೂಕ್ಷ್ಮವಾಗಿ, ಸೂಕ್ಷ್ಮಕ್ಕೆ ಸ್ಥೂಲವಾಗಿ ಆ ಕಲ್ಲಿಯ ದ್ವಾರದಲ್ಲಿ ಅಲ್ಲಿಯೆ ನುಸುಳುತ್ತ ಕಲ್ಲಿಗೆ ಹೊರಗಾಗುತ್ತ, ಮತ್ತಾ ಕಲ್ಲಿಗೆ ಒಳಗಾಗುತ್ತ ಸ್ಥಲಂಗಳನರಿದು ಹೊರಗಾಗುತ್ತ ಭಾವಜ್ಞನಾಗಿ ಭಾವವಿರಹಿತನಾದೆಯಲ್ಲಾ ಮಾವನ ಮಗಳಿಗೆ ಅಣ್ಣನಾದೆಯಲ್ಲಾ ಕದಂಬಲಿಂಗಾ.