Index   ವಚನ - 10    Search  
 
ಸಾಲು ಕೊಡಬೆಗೆ ಹೊಗದು. ಆರು ಕೊಡಬೆಗೆ ಬಾರದು. ಮೂರು ಕುಳಿಗೆ ಸಿಕ್ಕದು ನೋಡಾ! ಬಸವಣ್ಣನ ಅಂಗದಲ್ಲಿ ಹರಿದು ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ ಪ್ರಭುದೇವರ ಕರದಲ್ಲಿ ಸಿಕ್ಕಿದೆಯಲ್ಲಾ. ಸಿಕ್ಕಿ ನಿನ್ನ ಕುಲಿಶದ ಹೊಲಸೇಕೆ ಅಡಗದು? ಇಂತೀ ತ್ರಿವಿಧದ ಕಲಸಾಟವ ಬಿಡು, ಕದಕತನ ಬೇಡ ಕದಂಬಲಿಂಗಾ.