Index   ವಚನ - 3    Search  
 
ಕಾಣುತವೆ ಬಂದುದನರಿದು, ಕಂಡಾತನ ಮನಧರ್ಮದ ಚಂದವ ಕಂಡು, ಬಂದಿತ್ತು ಬಾರದೆಂಬ ಸಂದೇಹ ನಿಂದು, ಇದೆಲ್ಲವೂ ಲಿಂಗಾಣತಿಯೆಂಬ ಸಂದನರಿದು ವರ್ಮದ ಮಾಟದವಂಗೆ ತಾ ವರ್ಮಿಗನಾಗಿದ್ದು, ಗಂಡಭೇರುಂಡನ ಪಕ್ಷಿಯಂತೆ ಒಡಲೊಂದೆ ಉಭಯ ಶಿರ ಬೇರಾದ ತೆರ. ಉಭಯಸ್ಥಲದ ಹೊಲದ ನಲವಿನ ಪಥ. ಮೇಖಲೇಶ್ವರಲಿಂಗದ ಒಲವಿನ ಕುಲ.