Index   ವಚನ - 4    Search  
 
ಕಾಲನಾಲ್ಕು ಮುರಿದು, ಕೋಡೆರಡ ಕಿತ್ತು, ಆರಡಗಿತ್ತು ತಗರಿನ ಹಣೆಯಲ್ಲಿ. ಮೂರು ಹೋಯಿತ್ತು ತಗರಿನ ಕೋಡೆರಡರಲ್ಲಿ. ಎಂಟು ಹೋಯಿತ್ತು ಕಾಲು ನಾಲ್ಕರಲ್ಲಿ. ತಗರಿನ ಜೀವ ಉಭಯದ ಸನ್ನೆಯಲ್ಲಿ ಹೋಯಿತ್ತು. ಇಂತೀ ಕಲಕೇತ ವಿದ್ಯವ ಧರಿಸಿ ಮಹಾಶರಣರ ಮನದ ಮಂದಿರದಲ್ಲಿ ಕಲಕೇತನ ಒಲವರದಲ್ಲಿ ಮೂಡಿ ಮುಳುಗಬೇಡಾ ಎಂದು ಸಾರಿ ಮಾರಬಂದೆ. ಶುದ್ಧಪ್ರಸಾದ ಎನಗುಂಟು, ಸಿದ್ಧಪ್ರಸಾದ ಎನಗುಂಟು, ಪ್ರಸಿದ್ಧಪ್ರಸಾದ ನಿಮಗುಂಟು, ಆ ಪ್ರಸನ್ನಪ್ರಸಾದ ಎನಗೆ ಬೇಕೆಂದು ಮೇಖಲೇಶ್ವರಲಿಂಗವನೊಡಗೂಡಿಕೊಂಡು ಬೇಡ ಬಂದೆ.