Index   ವಚನ - 34    Search  
 
ಎರಡು ಕೊಟ್ಟು ಒಂದು ಕೊಂಡೆ, ಒಂದು ಕೊಟ್ಟು ಏನೂ ಕೊಳ್ಳಲಿಲ್ಲ. ಮೂರುಹಣವ ಕೊಟ್ಟು ಮೂರುರತ್ನವ ಕೊಂಡೆ. ಮೂರು ಕೊಂದು ಆರು ಮಂದಿಗೆ ಹೇಳದೆ ಏಳರಲ್ಲಿ ಸತ್ತು ಸಂಸಾರ ಮಾಡುತಿರ್ದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.