Index   ವಚನ - 86    Search  
 
ಹಾದಿಹೊಲವ ಮಾಡಿ, ಮೂರೆತ್ತು ಹೂಡಿ, ಆ ಮೂರೆತ್ತಿಗೆ ಒಂದು ನೊಗ ಕಟ್ಟಿ, ನೇಗಲಿಯ ಹೂಡಿ, ಕರಕಿಯ ಬಿಟ್ಟು ಕಣಗಿಲ ತೆಗೆದು, ಹೊಲ ಹಸನ ಮಾಡಿ, ಗೋದಿ, ಕಡಲೆ, ಜೋಳ ಮೊದಲಾದ ಹದಿನೆಂಟು ಧಾನ್ಯ ಜೀನಸವಿಲ್ಲದೆ ಬಿತ್ತಿಬೆಳೆದು ಹಕ್ಕಿ ಹೊಡೆಯದೆ ಹೊಲವ ಮಾಡಿ ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.