Index   ವಚನ - 146    Search  
 
ಕಾಶಿಗೆ ಹೋಗಬೇಕೆಂಬಣ್ಣಗಳು ನೀವು ಲಾಲಿಸಿರಯ್ಯ, ಕಾವಡಿಯ ಹೊತ್ತು ಹೋಹ ವಿಪ್ರನ ಕಾವಡಿಯನೊಡದು ವಿಪ್ರನ ಕೊಂದು ಬೆಕ್ಕುನಾಯಿಗಳು ಮಾತಾಪಿತರುಗಳು, ಸತಿಸುತರುಗಳು ಮೊದಲಾದವರುಗಳನ್ನು ಕ್ಷಣದಲ್ಲಿ ಹತಮಾಡಿ, ಕಾಶಿಯ ಬಟ್ಟೆಯ ಮೆಟ್ಟಿ ಪೋಗುವ ಭಕ್ತಜನರಿಗೆ ಮೋಕ್ಷವೆಂಬುದು ಕರತಳಾಮಳಕವಾಗಿ ಕಾಣುವುದು ನೋಡೆಂದ, ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.