Index   ವಚನ - 147    Search  
 
ಪರ್ವತಮಲ್ಲಯ್ಯನ ಯಾತ್ರೆಗೆ ಹೋಗಬೇಕೆಂಬರಯ್ಯಾ, ಅದೇನು ಕಾರಣವೆಂದಡೆ : ಗ್ರಂಥ : 'ಶ್ರೀಶೈಲಶಿಖರಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ' ಎಂದುದಾಗಿ, ಅಂತಪ್ಪ ಪರ್ವತಮಲ್ಲಯ್ಯನ ಶಿಖರವ ಕಂಡಾಕ್ಷಣದಲ್ಲಿ ಮೋಕ್ಷವಾಹುದೆಂದು, ಶ್ರುತಿ ಪುರಾಣ ವಾಕ್ಯಂಗಳ ಕೇಳಬಲ್ಲಂಥ ಭಕ್ತಜನಂಗಳು, ಉಳಿದಂಥ ಕೆಲವು ಗಣಂಗಳು ಇಂತೀ ಸರ್ವರು ಕೂಡಿ ಸಾಲ ಕಡ ಮಾಡಿ ಹೊನ್ನು ತಂದು ಒಂದೊತ್ತು ಬರಿಗಾಲಿಲೆ ನಡೆವುತ್ತ ಆಸತ್ತು, ಬೇಸತ್ತು, ಅಳಲಿ, ಬಳಲಿ ಶಿವಶಿವಾ ಹರಹರಾ ಎಂದು ಮಲ್ಲಯ್ಯನ ನೆನೆವುತ್ತ ಎಡವುತ್ತ, ಮುಗ್ಗುತ್ತ ನಿನ್ನ ಪಾದ ಎಂದು ಕಂಡೆವು ಎನ್ನುತ್ತ, ಸಕಲ ಲೋಕಾದಿಲೋಕಂಗಳೆಲ್ಲ ಇಂತೀ ಪರಿಯಲ್ಲಿ ಹೋಹರಯ್ಯಾ. ಇವರಿಗೆ ಮಲ್ಲಯ್ಯನ ದರುಶನವಿಲ್ಲ. ಅವನ ಶಿಖರವ ಕಾಣಬಾರದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.