Index   ವಚನ - 149    Search  
 
ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು, ವಿಚಾರಿಸಿಕೊಳ್ಳಲರಿಯದೆ ತಮ್ಮ ತನುಮನದ ಉಲ್ಲಾಸದಿಂದ, ಕಾಶಿ ಶ್ರೀಶೈಲ ರಾಮೇಶ್ವರ ಉಳವಿ ಗೋಕರ್ಣ ಕಾರ್ತಿಕ ಕಂಚಿ ಹಂಪಿ ಮೊದಲಾದ ಸಕಲ ಕ್ಷೇತ್ರಯಾತ್ರೆಗಳಲ್ಲಿ ತಿರುಗಿ ತಿರುಗಿ ತನುಮನ ಬಳಲಿ ಶ್ರಮಬಟ್ಟರಲ್ಲದೆ ಶಿವನ ಕಾಣಲರಿಯರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.