Index   ವಚನ - 150    Search  
 
ಒಂದು ಕ್ಷೇತ್ರಕ್ಕೆ ಹೋಗಿ ಬ್ರಹ್ಮಲೋಕವ ದಾನವ ಕೊಟ್ಟೆ. ಎರಡನೆಯ ಕ್ಷೇತ್ರಕ್ಕೆ ಹೋಗಿ ವಿಷ್ಣುಲೋಕವ ದಾನವ ಕೊಟ್ಟೆ, ಮೂರನೆಯ ಕ್ಷೇತ್ರಕ್ಕೆ ಹೋಗಿ ರುದ್ರಲೋಕವ ದಾನವ ಕೊಟ್ಟೆ, ನಾಲ್ಕನೆಯ ಕ್ಷೇತ್ರಕ್ಕೆ ಹೋಗಿ ಈಶ್ವರಲೋಕವ ದಾನವ ಕೊಟ್ಟೆ. ಐದನೆಯ ಕ್ಷೇತ್ರಕ್ಕೆ ಹೋಗಿ ಸದಾಶಿವಲೋಕವ ದಾನವ ಕೊಟ್ಟೆ, ಆರನೆಯ ಕ್ಷೇತ್ರಕ್ಕೆ ಹೋಗಿ ಶಿವಲೋಕವ ದಾನವ ಕೊಟ್ಟೆ, ಏಳನೆಯ ಕ್ಷೇತ್ರಕ್ಕೆ ಹೋಗಿ ಮರ್ತ್ಯಲೋಕವ ದಾನವ ಕೊಟ್ಟೆ. ಎಂಟನೆಯ ಕ್ಷೇತ್ರಕ್ಕೆ ಹೋಗಿ ಸ್ವರ್ಗಲೋಕವ ದಾನವ ಕೊಟ್ಟೆ, ಒಂಬತ್ತನೆಯ ಕ್ಷೇತ್ರಕ್ಕೆ ಹೋಗಿ ಪಾತಾಳಲೋಕವ ದಾನವ ಕೊಟ್ಟೆ, ದಶ ಕ್ಷೇತ್ರಕ್ಕೆ ಹೋಗಿ ಚತುರ್ದಶಭುವನ ದಾನವ ಕೊಟ್ಟೆ. ನಾ ಸತ್ತು ಬದುಕಿದವರ ಹೊತ್ತು ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.