Index   ವಚನ - 168    Search  
 
ಪಂಚವರ್ಣದ ವಟವೃಕ್ಷದ ಘಟ್ಟದಲ್ಲಿ ಕಿಷ್ಕಿಂದಕೋಣೆಯೊಳಗೆ ಅಡಗಿರ್ದ ಅಗ್ನಿ ಪುಟವಾಗಿ ಕೋಣೆ ವಟವೃಕ್ಷದ ಘಟ್ಟವ ದಹಿಸಿ, ವರ್ಣ ಉಳಿದು ನಿರ್ವರ್ಣವ ಕೂಡಿ ನಿರ್ವಯಲಾಯಿತ್ತು. ಇದ ತಿಳಿಯಬಲ್ಲರೆ ಪ್ರಾಣಲಿಂಗಿ ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.