ಗುರುಲಿಂಗಜಂಗಮದ ಪಾದೋದಕ
ಪ್ರಸಾದಪ್ರೇಮಿಗಳೆಂದು,
ನುಡಿದುಕೊಂಬ ನುಡಿಯಜಾಣರಲ್ಲದೆ,
ಆ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಸೇವಿಸಿ
ಭವಹಿಂಗಿಸಲರಿಯರು.
ಅದೆಂತೆಂದಡೆ :
ಶುದ್ಧಪ್ರಸಾದದಿಂದ ಮರ್ತ್ಯದ ಹಂಗು ಹಿಂಗಿತ್ತು.
ಸಿದ್ಧಪ್ರಸಾದದಿಂದ ಸ್ವರ್ಗದ ಹಂಗು ಹಿಂಗಿತ್ತು.
ಪ್ರಸಿದ್ಧಪ್ರಸಾದದಿಂದ ಪಾತಾಳದ ಹಂಗು ಹಿಂಗಿತ್ತು.
ಮಹಾಪ್ರಸಾದದಿಂದ ಹದಿನಾಲ್ಕುಲೋಕದ ಹಂಗು ಹಿಂಗಿತ್ತು.
ಇಂತೀ ಪ್ರಸಾದದ ಗ್ರಾಹಕದಿಂ
ಗುರು-ಲಿಂಗ-ಜಂಗಮದ ಹಂಗು ಹಿಂಗಿ,
ಸತಿಪತಿಯರು ಸತ್ತು ಅವರೆಲ್ಲಿರ್ದರು ಎಂಬುದನಾರೂ
ಅರಿಯರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Guruliṅgajaṅgamada pādōdaka
prasādaprēmigaḷendu,
nuḍidukomba nuḍiyajāṇarallade,
ā trimūrtigaḷa pādōdaka prasādava sēvisi
bhavahiṅgisalariyaru.
Adentendaḍe:
Śud'dhaprasādadinda martyada haṅgu hiṅgittu.
Sid'dhaprasādadinda svargada haṅgu hiṅgittu.
Prasid'dhaprasādadinda pātāḷada haṅgu hiṅgittu.
Mahāprasādadinda hadinālkulōkada haṅgu hiṅgittu.
Intī prasādada grāhakadiṁ
guru-liṅga-jaṅgamada haṅgu hiṅgi,
satipatiyaru sattu avarellirdaru embudanārū
ariyarayyā
kāḍanoḷagāda śaṅkarapriya cannakadambaliṅga
nirmāyaprabhuve.