Index   ವಚನ - 222    Search  
 
ಪಂಚವರ್ಣದ ಚಿತ್ತದ ಮೂರುಮುಖ ವೃಶ್ಚಿಕನ ಮುಳ್ಳುತಾಗಿ, ಮೂರುಲೋಕವು ಬೇನೆಹತ್ತಿ ಬೇವುತಿದ್ದಿತು. ಆ ಮುಳ್ಳಿನ ನಂಜೇರಿ ಮೂರುಲೋಕ ಪ್ರಳಯವಾಗಿ ರಾಜರು ಮಡಿದರು. ಆ ಶಿವಶರಣ ನೋಡಿ ಕಲ್ಲು ಮರೆಗೊಂಡ ಭೇದವ ತಿಳಿಯಬಲ್ಲಾತ ಅಸುಲಿಂಗಿ ಎಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.