Index   ವಚನ - 223    Search  
 
ಅವಿದ್ಯಾಪಟ್ಟಣದ ಹೊರಕೇರಿಯಲ್ಲಿ ಅಂಗವಿಲ್ಲದ ಉರಿಮಾರಿ ಬಿಳಿಯ ಸೀರೆಯನುಟ್ಟು ಹೆಂಡವ ಹೊತ್ತು ಮಾರುತ್ತಿಹಳು. ಆ ಹೆಂಡವ ಕುಡಿಯಬೇಕೆಂದು ಅವಿದ್ಯಾನಗರದ ಅರಸು ಮಂತ್ರಿಗಳು ಮೊದಲಾದ ಜನಂಗಳು ಪೋಗುತಿರ್ಪರು. ಹೆಂಡವ ಮಾಡಿ ಕಂಡವ ಕೊಡಳು. ಹೊನ್ನು ಇದ್ದವರಿಗೆ, ಸತಿಸಂಗದಲ್ಲಿದ್ದವರಿಗೆ, ಇಬ್ಬರ ಸಂಗದಲ್ಲಿ ವರ್ತಿಸಿದವರಿಗೆ ಸಂಗಮಾಡಳು. ಹೆಂಡ ಕೊಡಳು, ಖಂಡ ಮಾರಳು. ಕೈಕಾಲು ಕಣ್ಣು ಇಲ್ಲದ ಬಡವರು ಬಂದರೆ ಕಂಡವ ತಿನಿಸಿ, ಹೆಂಡ ಕುಡಿಸಿ, ಸಂಗಸುಖದಲ್ಲಿ ಅಗಲದೆ ಇರ್ಪಳು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.