ರಂಡೆಮುಂಡೆಯ ಮಗ ರಾಜಕುಮಾರ
ಗಗನದಲ್ಲಿ ಪುಟ್ಟಿ, ಭೂಮಿಯಲ್ಲಿ ಬಂದು,
ಆ ಭೂಮಿಯ ರಾಜನಲ್ಲಿ ಯುದ್ಧವ ಮಾಡಿ,
ಆನೆಯ ಹಲ್ಲು ಕಿತ್ತು, ಕುಂಭವನೊಡೆದು,
ಕುದುರೆಯ ಕಾಲ ಮುರಿದು, ನಾಯಿಯ ನಾಲಿಗೆ ಕಿತ್ತು,
ಬೆಕ್ಕಿನ ಕಣ್ಣು ಕಳೆದು ಉಣ್ಣದೆ ಉಪವಾಸ ಮಾಡದೆ
ಯುದ್ಧದಿಂ ತ್ರಿಲೋಕದ ರಾಜರ ಗೆದ್ದು,
ತ್ರಿಲೋಕದ ರಾಜರಲ್ಲಿ ಸತ್ತು ನಿಂದಿತ್ತು.
ಈ ಭೇದವ -
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ
ಮಿಕ್ಕಿನ ಜೀವಾತ್ಮರು ಅರಿಯರು.