Index   ವಚನ - 238    Search  
 
ಪ್ರಾಣಲಿಂಗಿಯ ನಿಲವ ಪೇಳ್ವೆ. ಬಲ್ಲರೆ ಪೇಳಿರಿ, ಅರಿಯದಿದ್ದರೆ ಕೇಳಿರಯ್ಯಾ. ಪ್ರಾಣಲಿಂಗಿಗೆ ಪ್ರಪಂಚದ ಪ್ರೇಮವುಂಟೆ? ಪ್ರಾಣಲಿಂಗಿಗೆ ಮಾತಾಪಿತ, ಸತಿಸುತರುಗಳು ಮೊದಲಾದ ಬಂಧುಗಳ ಸ್ನೇಹಿತರ ಪ್ರೇಮವುಂಟೆ? ಪ್ರಾಣಲಿಂಗಿಗೆ ಪರದ್ರವ್ಯದ ಪ್ರೇಮವುಂಟೆ ? ಪ್ರಾಣಲಿಂಗಿಗೆ ದ್ವೈತಿಗಳಾದ ವೇದಾಂತಿ, ಸಿದ್ಧಾಂತಿಗಳು ಮೊದಲಾದ ಭಿನ್ನಭಾವದ ಜೀವಾತ್ಮರಲ್ಲಿ ಪ್ರೇಮವುಂಟೆ? ಪ್ರಾಣಲಿಂಗಿಗೆ ಊಟ ಉಡಿಗೆ ತೊಡಿಗೆ ಮೃಷ್ಟಾನ್ನ ಭೋಜನವ ಸೇವಿಸಿ, ಸಕಲಪದಾರ್ಥವ ಭೋಗಿಸಬೇಕೆಂಬ ಮಮಕಾರವುಂಟೆ? ಇಂತೀ ಮಾಯಾಪ್ರಪಂಚದ ವಿಲಾಸದ ಮೇಲಣ ಮಮಕಾರವನಳಿದುಳಿದಾತನೇ ಪ್ರಾಣಲಿಂಗಿ, ಇಲ್ಲದಾತನೇ ಅಂಗಲಿಂಗಿ ಮುಖಭಂಗಿತರಾದ ಜೀವರುಗಳು ಎಂದರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.