Index   ವಚನ - 248    Search  
 
ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿರಬೇಕು. ವಿರಕ್ತನಾದಡೆ ಊರನಾಶ್ರಯಿಸಿ ಮನೆ, ಮನೆ ಭಿಕ್ಷವ ಬೇಡಬೇಕು. ವಿರಕ್ತನಾದಡೆ ಅರಣ್ಯ ಪರ್ವತ ಕಮಳಸರೋವರ ನದಿಗಳಲ್ಲಿರಬೇಕು. ವಿರಕ್ತನಾದಡೆ ದೇಶಬಿಟ್ಟು ಪರದೇಶಕ್ಕೆ ಹೋಗಬೇಕು. ವಿರಕ್ತನಾದಡೆ ಮಂಡೆಬೋಳಾಗಿ ನೀರ ಬೂದಿಯ ಧರಿಸಿ ಅಂಗದ ಮೇಲೆ ಲಿಂಗವಕಟ್ಟಿ ತಿರುಗಬೇಕು. ಇಂತೀ ಭೇದವ ತಿಳಿಯಬಲ್ಲರೆ ವಿರಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.