Index   ವಚನ - 256    Search  
 
ಮೋಟುಗಿಡದಲ್ಲಿ ಹೂವು ಕಾಯಿಲ್ಲದೆ ಫಲದೋರಿ ಬೇರಿನಲ್ಲಿ ಹಣ್ಣಾಗಿ, ಆ ಹಣ್ಣಿಗೆ ನಾಲ್ವರು ಹೆಣಗಾಡುತ್ತಿರ್ಪರು. ಆ ಹಣ್ಣನೇ ಮೂವರು ಸೇವಿಸಿ ಬದುಕಿದರು. ಅದರೊಳಗೊಬ್ಬ ಸತ್ತಿರ್ಪನು. ಇದರರ್ಥವ ಹೇಳಬಲ್ಲರೆ ಅನಾದಿಗುರುಲಿಂಗಜಂಗಮವೆಂಬೆ. ಇಂತೀ ಭೇದವ ತಿಳಿಯಬಲ್ಲರೆ ಅನಾದಿಶಿಷ್ಯಶರಣ ಭಕ್ತನೆಂಬೆ. ಇವರಿಂದ ಅಂದಚಂದ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.