Index   ವಚನ - 276    Search  
 
ಕಮಲಪ್ರಸಾದ ಬ್ರಹ್ಮನ ನುಂಗಿತ್ತು. ಕರಳಪ್ರಸಾದ ವಿಷ್ಣುವಿನ ನುಂಗಿತ್ತು. ಕೋಣಿಪ್ರಸಾದ ರುದ್ರನ ನುಂಗಿತ್ತು. ಆಕಾಶಪ್ರಸಾದ ಬ್ರಹ್ಮಾಂಡ ನುಂಗಿತ್ತು. ಈ ನಾಲ್ಕು ಪ್ರಸಾದ ನುಂಗಿದಾತನೇ ಪ್ರಾಣಲಿಂಗಿ ಪ್ರಸಾದಿ. ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.