ಎರಡುಗಾಲಿಯ ಬಂಡಿಯ ಮುರಿದು
ಮೂರುಗಾಲಿಯ ಬಂಡಿಯ ಹೂಡಿ,
ಮೂಗೇಣ ಬಿಟ್ಟು, ಮೂಯೆತ್ತ ಕಟ್ಟಿ,
ಭೂಮಿಲ್ಲದಾರಣ್ಯ ಬೆಟ್ಟದ
ಕಲ್ಲ ಬಂಡಿತುಂಬ ತುಂಬಿತಂದು
ಬೇಡಿದವರಿಗೆ ಕಲ್ಲ ಕೊಡೆ,
ಬೇಡದವರಿಗೆ ಕಲ್ಲ ಹಾಕಿ,
ಹಾಗದ ರೊಕ್ಕವ ಕೊಂಡು,
ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Eraḍugāliya baṇḍiya muridu
mūrugāliya baṇḍiya hūḍi,
mūgēṇa biṭṭu, mūyetta kaṭṭi,
bhūmilladāraṇya beṭṭada
kalla baṇḍitumba tumbitandu
bēḍidavarige kalla koḍe,
bēḍadavarige kalla hāki,
hāgada rokkava koṇḍu,
kāyakava māḍutirdarayya
kāḍanoḷagāda śaṅkarapriya cannakadambaliṅga
nirmāyaprabhuve.