Index   ವಚನ - 324    Search  
 
ಮೂರು ಹೊನ್ನಿಗೆ ಹಚ್ಚಡವ ಮಾರಿದೆ. ಆರು ವರಹಕ್ಕೆ ಶಾಲ್ಯವ ಮಾರಿದೆ. ಒಂದು ಮೋಹರಕ್ಕೆ ಮುಂಡಾಸವ ಮಾರಿದೆ. ಇಂತೀ ಕಪ್ಪಡವ ಮಾರಿ ಹಲವು ಹಣವ ಕೊಟ್ಟು, ಶಾಲ ಕೊಂಡು, ಹೊತ್ತು ಕಾಯಕವ ಮಾಡುತಿರ್ದರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.