Index   ವಚನ - 333    Search  
 
ಮಣ್ಣಿಲ್ಲದ ಮುಶಿಯೊಳಗೆ ಪಂಚರಸದ ಲೋಹವ ಹಾಕಿ ಮೂರು ಬೆಂಕಿಯ ಕುಕ್ಕಿ, ಜೋಡು ತಿದಿ ಕೂಡಿ ಊದಲು, ಆರುವರ್ಣದ ಲೋಹವಾಯಿತ್ತು. ಆ ಲೋಹಕ್ಕೆ ಮೂರು ನದಿಗೂಡಿದ ಉದಕವ ಕುಡಿಸಲು, ಉಭಯವು ಬಯಲಾದ ಬಯಲವನು ನುಂಗಿ ಹಿಂಗದೆ ಕಾಯಕವ ಮಾಡುತ್ತಿರ್ಪರು ನೋಡೆಂದ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.