Index   ವಚನ - 335    Search  
 
ಕತ್ತೆಯ ಕಟ್ಟದೆ, ಮಡಿಯ ಮುಟ್ಟದೆ, ಬಿಜ್ಜಳನ ಕಪ್ಪಡದ ಹಣವಕೊಂಡುಣ್ಣದೆ, ನಾಯಿಯ ಕಟ್ಟಿ, ಮೈಲಿಗೆಯ ಮುಟ್ಟಿ, ಬಸವನ ಕಪ್ಪಡದ ಹಣವಕೊಂಡುಂಡು, ಸೂರ್ಯನ ನುಂಗಿ ಸೊಪ್ಪೆಯ ಸುಟ್ಟು, ಚಂದ್ರನ ನುಂಗಿ ನಡುರಂಗವ ಸುಟ್ಟು, ಅಗ್ನಿಯ ನುಂಗಿ ಕೋಣೆಯ ಸುಟ್ಟು ಭಸ್ಮವ ಧರಿಸಿ, ಕಾಯಕವ ಮಾಡುತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.