Index   ವಚನ - 351    Search  
 
ಮೂರಳಿದು ಮೂರುಳಿದು ಮೂರೊಂದುಗೂಡಿದವರ ಕೂಡಬೇಕೆಂಬವರಿಗೆ ಪಂಚಾಂಗವ ಬಿಚ್ಚಿ ಮುಹೂರ್ತವ ಪೇಳಬೇಕು. ಆರಳಿದು ಆರುಳಿದು ಆರುಗೂಡಿದವರ ಕೂಡಬೇಕೆಂಬವರಿಗೆ ಪಂಚಾಂಗವ ಬಿಚ್ಚಿ ಮುಹೂರ್ತವ ಪೇಳಬೇಕು. ಎಂಟಳಿದು ಎಂಟುಳಿದು ಎಂಟುಗೂಡಿದವರ ಕೂಡಿ ಕಂಟಕವ ಗೆಲೆಯಬೇಕೆಂಬವರಿಗೆ ಪಂಚಾಂಗವ ಬಿಚ್ಚಿ ಮುಹೂರ್ತವ ಪೇಳಬೇಕು ನೋಡೆಂದನಯ್ಯಾ ಗೋವಿಂದಭಟ್ಟ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.