Index   ವಚನ - 361    Search  
 
ಕರಿಶಾಲಿಯ ಹರಕ ಬಿಡಿಹೊಲಿಗೆಯ ಕರಿಕುಪ್ಪಸ, ಕರಿಗೊಂಗಡಿ ಕುಂಚಿಗೆ- ಇಂತೀ ಮೂರುಜೀನಸು ಹೊಲಿಯದೆ ಶಾಲು ಶಕಲಾತಿ ಸುಳುಹು ಮೊದಲಾದ ಬಣ್ಣದ ಕಪ್ಪಡವ ಹೊಲಿವರು. ಆ ಕಪ್ಪಡವ ಕೊಂಡು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಆಚಾರ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.