ಕೀಲಿಲ್ಲದ ಕತ್ತರಿ, ಹಿನ್ನಿಯಿಲ್ಲದ ಸೂಜಿ, ನೂಲಿಲ್ಲದ ದಾರ.
ಕತ್ತರಿಯ ಬ್ರಹ್ಮನುಂಗಿದ, ಸೂಜಿಯ ವಿಷ್ಣುನುಂಗಿದ,
ದಾರವ ರುದ್ರನುಂಗಿದ.
ಗಜಕಟ್ಟಿಗೆ ಸಿಂಪಿಗೇರ ಸಂಗಣ್ಣ ನುಂಗಿ
ಕಾಯಕವ ಮಾಡುತ್ತಿರ್ಪರು ನೋಡೆಂದನಾಚಾರ್ಯನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Kīlillada kattari, hinniyillada sūji, nūlillada dāra.
Kattariya brahmanuṅgida, sūjiya viṣṇunuṅgida,
dārava rudranuṅgida.
Gajakaṭṭige simpigēra saṅgaṇṇa nuṅgi
kāyakava māḍuttirparu nōḍendanācāryanu
kāḍanoḷagāda śaṅkarapriya cannakadambaliṅga
nirmāyaprabhuve.