Index   ವಚನ - 378    Search  
 
ಪಂಚವರ್ಣದ ಗಾಣ, ಆರೇಣಿನ ಕಣಿ, ಎರಡೆತ್ತು ಹೂಡಿ, ಹುರಿದ ಬೀಜದ ಎಣ್ಣೆಯ ತೆಗೆದು, ಉಂಡವರು ಕೈಕಂಡವ ಆರಿಗೂ ತೋರಿ ಉಸುರದೆ ನುಂಗಿ, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.