Index   ವಚನ - 383    Search  
 
ಕರಿಹಾಸ ಆರುಮೊಳ ಹೂಡಿ, ಬಣ್ಣದ ಕುಂಚಗಿಯಲ್ಲಿ ಮೂರೆಳೆಯ ನೆಯ್ಯಲು ಆರುಮಳ ಕರಿಹಾಸ ಅಳಿದು, ಮೂರುಮೊಳ ಬಿಳಿಹಾಸನೊಳಕೊಂಡು ಒಂದು ಮೊಳದ ರೇಷ್ಮೆ ಹಾಸನುಳಿಯಿತ್ತು. ಉಳಿದ ಹಾಸಿನ ಎಳಿ ಒಂಬತ್ತು ಬಣ್ಣದ ಲಾಳಿಯ ನುಂಗಿ, ನುಂಗಿದ ಎಳೆಯ ನೆಯ್ವಣ್ಣನು ಸರ್ವಾಂಗದಲ್ಲಿ ಸುತ್ತಿ ಸತ್ತಿರ್ಪನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.