Index   ವಚನ - 399    Search  
 
ಸೂರ್ಯವರ್ಣದ ಚಾಪೆ ಬ್ರಹ್ಮಲೋಕವ ನುಂಗಿತ್ತು. ಚಂದ್ರವರ್ಣದ ಚಾಪಿ ವಿಷ್ಣುಲೋಕವ ನುಂಗಿತ್ತು. ಅಗ್ನಿವರ್ಣದ ಚಾಪಿ ರುದ್ರಲೋಕವ ನುಂಗಿತ್ತು. ಉಳಿದ ವರ್ಣದ ಚಾಪಿ ಹಲವು ಲೋಕ ಬ್ರಹ್ಮಾಂಡವ ನುಂಗಿತ್ತು. ನುಂಗದೆ ಹಿಂಗದಿರಬಲ್ಲಡೆ ಕಾಯಕದಲ್ಲಿರಬೇಕು. ಹಿಂಗಿದಡೆ ಭಂಗ, ಅಂತಕನವರ ಮನೆವಾಸ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.