Index   ವಚನ - 425    Search  
 
ಪಂಚಲೋಹವ ಕರಗಿಸಿ ರಸ ಬೆರೆಸಲು ಚಿನ್ನದಲೋಹವಾಯಿತ್ತು. ಆ ಚಿನ್ನದ ಲೋಹಭಾಂಡದಲ್ಲಿ ತಣ್ಣೀರು ತುಂಬದೆ ಬಿಸಿನೀರ ತುಂಬಿ ಬಿಸಿಲಲ್ಲಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.