Index   ವಚನ - 430    Search  
 
ಎರಕದ ಭಾಂಡಕ್ಕೆ ತೂಕಿಲ್ಲ, ಹಣವಿಲ್ಲ. ಚಕ್ಕಿಯ ಭಾಂಡಕ್ಕೆ ತೂಕುಂಟು ಹಣವುಂಟು. ಎರಕದ ಭಾಂಡವ ಕೊಂಡವರು ಹೊರಕೇರಿಯವರು. ಮಿಕ್ಕಾದ ಚಕ್ಕಿಯ ಭಾಂಡವ ಕೊಂಡವರು ಗ್ರಾಮದವರು. ಎರಡಿಲ್ಲದೆ ಕೊಂಬವರು ಲಿಂಗೈಕ್ಯರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ