Index   ವಚನ - 440    Search  
 
ಕರಿದು ಕೆಂಪು ಬಿಳಿದು ಮೊದಲಾದ ಬಣ್ಣವನೆದ್ದದೆ ಹಳದಿ ಬಣ್ಣವನೆದ್ದಿ ವ್ಯಾಪಾರವ ಮಾಡುತ್ತಿರ್ಪರು. ಅದೇನುಕಾರಣವೆಂದಡೆ, ಆ ತ್ರಿಬಣ್ಣ ಮೊದಲಾದ ಅನೇಕ ಬಣ್ಣಕ್ಕೆ ಮೇಲುಂಟು, ಹಳದಿಬಣ್ಣಕ್ಕೆ ಮೇಲಿಲ್ಲ. ಹಳದಿಬಣ್ಣದ ವ್ಯಾಪಾರವನುಳ್ಳವರು ಬಣ್ಣಗಾರನೊಳಗಾದರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.