Index   ವಚನ - 443    Search  
 
ಆಯತಲಿಂಗ ಮರ್ತ್ಯವ ನುಂಗಿತ್ತು. ಸ್ವಾಯತಲಿಂಗ ಸ್ವರ್ಗವ ನುಂಗಿತ್ತು. ಸನ್ನಹಿತಲಿಂಗ ಪಾತಾಳವ ನುಂಗಿತ್ತು. ತ್ರಿಣೇಶ್ವರಲಿಂಗ ಬ್ರಹ್ಮಾಂಡವ ನುಂಗಿತ್ತು. ನುಂಗಿದವರ ನುಂಗಿ ಬಾರದೆ ಪೋದರು. ಆದವರು ಪೋದರು, ಆಗದವರು ಪೋದರು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.