Index   ವಚನ - 455    Search  
 
ಕುರುಡ, ಕುಂಟ, ಅಧಮರು ಹಾಕಿದ ಗಾಳಕ್ಕೆ ಬಿದ್ದ ಮತ್ಸ್ಯವು ಸತ್ತಿರ್ಪವು. ಅರಸು, ಪ್ರಧಾನಿ, ಮಹಾವೀರರು ಹಾಕಿದ ಗಾಳಕ್ಕೆ ಬಿದ್ದ ಮತ್ಸ್ಯವು ಸಾಯದೆ ಇರ್ಪವು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.