Index   ವಚನ - 487    Search  
 
ಪಾಕವಾದನ್ನವನುಣ್ಣದೆ ಪಾಕವ ಮಾಡುಂಬೆವೆಂಬರು. ಕೊಟ್ಟ ಫಲವ ಬಚ್ಚಿಟ್ಟು ತಿನ್ನಲರಿಯದೆ ವೃಕ್ಷದ ಕೊನೆಯೊಳಗಣ ಫಲವ ತಿಂದೇವೆಂಬರು. ಇದ್ದವರನರಿಯದೆ ಸತ್ತವರ ಬಲ್ಲೆವೆಂಬರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.