Index   ವಚನ - 2    Search  
 
ಎರಡು ಮೊಲೆಯ ಪಶುವಿಂಗೆ ಕೊಂಬು ಮೂರು, ಕಿವಿ ನಾಲ್ಕು, ಕಣ್ಣೊಂದೆ. ಮೂರು ಮೊಲೆಯ ಪಶುವಿಂಗೆ ಕೊಂಬು ನಾಲ್ಕು, ಕಿವಿಯೊಂದು, ಕಣ್ಣು ಮೂರು. ನಾಲ್ಕು ಮೊಲೆಯ ಪಶುವಿಂಗೆ ಕುಂಬಾರು, ಕಿವಿಯೆಂಟು, ಕಣ್ಣೆರಡು. ಒಂದು ಮೊಲೆಯ ಪಶುವಿಂಗೆ ಕೊಂಬು ಹಿಂದೆ, ಕಿವಿ ಸಂದಿಯಲ್ಲಿ, ಕಣ್ಣು ನೆತ್ತಿಯಲ್ಲಿ, ಮುಟ್ಟಿ ನೋಡಿ ಕರೆದಹೆನೆಂದಡೆ ಕೆಚ್ಚಲು ಮೊಲೆಯೊಳಗಡಗಿತ್ತು. ಮೊಲೆಯ ಮುಟ್ಟಿ ನೋಡಿಯೆನೆಂದಡೆ ಬಟ್ಟಬಯಲು, ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾಯಿತ್ತು.