Index   ವಚನ - 3    Search  
 
ಕಂಟಕ ಬಂದಲ್ಲಿ ಸಂತೈಸಿಕೊಂಡು ಆತ್ಮನ ಸಂಚಲಿಸದೆ ನಿಷ್ಠೆಯಿಂದ ದೃಷ್ಟವ ಕಾಬುದು ಶ್ರದ್ಧೆ ಸದ್ಭಕ್ತನ ಇರವು, ವೃಥಾಳಾಪದಿಂದ ನಿಂದೆ, ದುರ್ಜನ ಬಂದಲ್ಲಿ ಸಂದು ಸಂಶಯವಿಲ್ಲದೆ ಅಂಗವ ಬಂಧಿಸದೆ ನಿಜಾತ್ಮನ ಸಂದೇಹಕಿಕ್ಕದೆ ಪರಮಾನಂದಸ್ವರೂಪನಾಗಿ ಬಂಧ ಮೋಕ್ಷ ಕರ್ಮಂಗಳ ಹರಿದಿಪ್ಪುದು ಸರ್ವಾಂಗಲಿಂಗಿಯ ಅರಿವು. ಅದು ಕರಿಗೊಂಡು ಎಡೆದೆರಪಿಲ್ಲದೆ ಪರಿಪೂರ್ಣನಾದುದು ಪರಮ ವಿರಕ್ತನ ಪರಿ. ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ತಾನಾದ ಶರಣನ ಇರವು.