ಕರ್ಪುರದ ಹಣತೆಯಲ್ಲಿ
ಬತ್ತಿಯ ಹಾಕಿ ಉರಹಬಹುದೆ?
ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತೆಂದು
ಹುಲ್ಲ ಸೊಪ್ಪು ಹಾಕಿ ಹೊತ್ತಿಸಬಹುದೆ?
ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು
ಅಲಗಿನ ಕ್ರೂರ ಸುಲಲಿತವೆನ್ನಬಹುದೆ?
ಆ ಗುಣ ಅಲ್ಲಲ್ಲಿಗೆ ದೃಷ್ಟ.
ಇದು ನಿಶ್ಚಯ ನಿಜ ಲಿಂಗಾಗಿಗೆ ಅರಿವಿನ ಭೇದ.
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದವನ ತೆರ.