Index   ವಚನ - 9    Search  
 
ವ್ಯಾಧನಂತೆ ಜಾಲಗಾರನಂತೆ ಹೇಮಚೋರನಂತೆ ಇಂತೀ ಗಾಹುಗಳ್ಳರಂತೆ ಮಾತಿನಲ್ಲಿ ಬ್ರಹ್ಮವ ನುಡಿದು ಸರ್ವ ಸಂಸಾರದಲ್ಲಿ ಏಳುತ್ತಾ ಮುಳುಗುತ್ತ ಬೇವುತ್ತ ನೋವುತ್ತ ಮತ್ತೆ ಬ್ರಹ್ಮದ ಸುಮ್ಮಾನದ ಸುಖಿಗಳಂತಪ್ಪರೊ? ಇಂತು ನುಡಿಯಬಾರದು ಸಮಯವ ಬಿಡಬಾರದು ಕ್ರೀಯ ಅರಿದು ಮರೆಯಬಾರದು ಜ್ಞಾನವ. ಇಂತೀ ಭೇದವನರಿದು ಹರಿದವಗಲ್ಲದೆ ಕಾಲಕರ್ಮವಿರಹಿತ ತ್ರಿಪುರಾಂತಕ ಲಿಂಗವು ಸಾಧ್ಯವಿಲ್ಲ.