Index   ವಚನ - 33    Search  
 
ಪುರಜನಂಗಳ ಮೆಚ್ಚಿಸುವರೆ ಪುರಪತಿಯೆ ಶರಣು? ಪರಿಜನಂಗಳ ಮೆಚ್ಚಿಸುವರೆ ಹಾದರಗಿತ್ತಿಯೆ ಶರಣು? ಸರ್ವಜನಂಗಳ ಮೆಚ್ಚಿಸುವರೆ ಸಂತೆಯ ಸೂಳೆಯೆ ಶರಣು? ತನ್ನ ಲಿಂಗವ ನಚ್ಚಿ ಮೆಚ್ಚೆ ಮುಕ್ತಿಗೆ ಇದೊಂದಚ್ಚು. ಮುಂದೆ ನಿಂದಕರೆದೆಯ ಸುಡುವ ಕಿಚ್ಚು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.