Index   ವಚನ - 35    Search  
 
ಹಂದಿಗೆ ಅಂದಳವನಿಕ್ಕಿದರೆ ಅರಸಾಗಬಲ್ಲುದೆ ಅದು? ಕುನ್ನಿಗೆ ರನ್ನದ ಹಲ್ಲಣವ ಹಾಕಿದರೆ ಕುದುರೆಯಾಗಬಲ್ಲುದೆ ಅದು? ಕನ್ನೆವೆಣ್ಣು ಕಲೆಯಸೂಳೆಯಾಗಬಲ್ಲಳೆ ಅವಳು? ಹೊನ್ನು ಕಬ್ಬುನವಾಗಬಲ್ಲುದೆ? ಬಿನ್ನಣದ ಭಕ್ತಿಯ ಮಾಡಿ ತಪ್ಪುವ ಅನ್ಯಕಾರಿಗಳ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.