Index   ವಚನ - 37    Search  
 
ಗುರುಕೊಟ್ಟ ಕುರುಹ ಬಿಟ್ಟು ನರರು ನಟ್ಟ ಕಲ್ಲಿಂಗೆ, ಒಟ್ಟಿದ ಮಣ್ಣಿಂಗೆ ನಿಷ್ಠೆವೆರದು ನುಡಿವ ಭ್ರಷ್ಠ ಕನಿಷ್ಠ ಕರ್ಮಿಗಳ ಮುಖವ ನೋಡಲಾಗದು. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.