Index   ವಚನ - 45    Search  
 
ಪುರಾತರ ಗೀತವನೋದಿ ಪುರಾತರ ಮಕ್ಕಳಾದಬಳಿಕ- ಕಿರಾತರ ಮಕ್ಕಳಂತೆ ಹೊತ್ತಿಗೊಂದು ಬಗೆ ದಿನಕ್ಕೊಂದು ಗುಣವ ನಡೆವುದಲ್ಲ, ಭಕ್ತನೇನು ಮುಗಿಲಬೊಂಬೆಯೆ? [ಮೊಲೆ]ನಾಗರಕಾಟವೆ? ಸುರಚಾಪವೆ? ಗೋಸುಂಬೆಯೆ? ನೋಡಿರೈ-ಕಡೆದು ಕಂಡಿಸಿದರೆ ಕುಂದಣದ ಪುತ್ಥಳಿಯಂತೆ ನಿಜಗುಂದದಿರುವುದೀಗಲೇ ಭಕ್ತಸ್ಥಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.