Index   ವಚನ - 47    Search  
 
ಎಲ್ಲರು ಅಹುದೆಂಬ ಪ್ರಮಾಣವ ಕಾಣಿರೊ. ಎಲ್ಲರು ಅಲ್ಲವೆಂಬ ಪ್ರಣಮ ಕಾಣಿರೊ. ಇದು ಕಾರಣ ಶಿವಶರಣರ ಹೃದಯದ ಸ್ಥಾನವನರಿಯದ ಶಿವದ್ರೋಹಿಗಳು ಅರಿಯದರಾಗಿ ಎನ್ನ ಅಹುದಲ್ಲವೆಂಬುದ ಶ್ರೀ ಗುರುನಾಥನೆ ಬಲ್ಲ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.